Index   ವಚನ - 34    Search  
 
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯೊಡನೆ ಸಂಗವು ಭಂಗವೆಂದರಿಯರು. ಭವಿಯೊಡನೆ ಸಂಗವ ಮಾಡುವರು ಕೂಡಲಚೆನ್ನಸಂಗಯ್ಯಾ ಅವರತ್ತಲೂ ಅಲ್ಲ-ಇತ್ತಲೂ ಅಲ್ಲ ಉಭಯ ಭ್ರಷ್ಟ.