Index   ವಚನ - 33    Search  
 
ಹಸಿವಿನ ಹಂಗಿಗೆ ಭವಿಪಾಕಕ್ಕಿಚ್ಛೆಯ ಮಾಡುವರು. ಮಥನದ ಹಂಗಿಗೆ ಭವಿಯ ಸಂಗಕ್ಕಿಚ್ಛೆಯ ಮಾಡುವರು. ಶ್ರೋತ್ರ ನೇತ್ರ ಘ್ರಾಣ ಸುಖವ ಭುಂಜಿಸುವನ್ನಕ್ಕ ಭಕ್ತನೆಂತೆಂಬೆ? ಲಿಂಗೈಕ್ಯನೆಂತೆಂಬೆ? ಕೂಡಲಚೆನ್ನಸಂಗಯ್ಯಾ, ಅವರು ಸಮಯಾಚಾರಕ್ಕೆ ದೂರ ನೋಡಯ್ಯಾ.