Index   ವಚನ - 60    Search  
 
ಲಿಂಗವನರಿವಡೆ ಮನವೇ ನಿಚ್ಚಣಿಕೆ, ಜಂಗಮವನರಿವಡೆ ಧನವೇ ನಿಚ್ಚಣಿಕೆ, ಪ್ರಸಾದವನರಿವಡೆ ತನುವೇ ನಿಚ್ಚಣಿಕೆ, ಈ ತ್ರಿವಿಧವನರಿವಡೆ ತ್ರಿವಿಧ ನಿಚ್ಚಣಿಕೆ, ಇದು ಕಾರಣ ಕೂಡಲಚೆನ್ನಸಂಗನ ಶರಣಂಗಲ್ಲದಿಲ್ಲವೀ ತ್ರಿವಿಧ ಸಂಪತ್ತು.