Index   ವಚನ - 61    Search  
 
ಲಿಂಗ ಪ್ರೇಮಿಗಳು ಜಂಗಮದನುವನರಿಯದಡೆ, ಜಂಗಮ ಪ್ರೇಮಿಗಳು ಲಿಂಗದನುವನರಿಯದಡೆ, ಪ್ರಸಾದ ಪ್ರೇಮಿಗಳು ಲೋಕದ ಸಂಗವನರಿಯದಡೆ, ಲಿಂಗಪ್ರೇಮಿಗಳೂ ಅಲ್ಲ, ಜಂಗಮ ಪ್ರೇಮಿಗಳೂ ಅಲ್ಲ, ಪ್ರಸಾದ ಪ್ರೇಮಿಗಳೂ ಅಲ್ಲ. ಆ ಬಡ ಜೀವಿಗಳಿಗೆ ಭಕ್ತಿಯೆಲ್ಲಿಯದೊ. ಕೂಡಲಚೆನ್ನಸಂಗಮದೇವಾ.