Index   ವಚನ - 62    Search  
 
ಮಾಡುವರಯ್ಯಾ ಮಾಡುವರಯ್ಯಾ ಉದ್ದೇಶಕ್ಕೆ ಭಕ್ತಿಯ. ಎಡೆಯಲೆ ಆಯಿತ್ತು, ಎಡೆಯಲೆ ಹೋಯಿತ್ತೆಂಬವಂಗೆ ಬಂದಿತ್ತೆ ಭಕ್ತಿ? ಕಳಶ ಪೂರಾಯವಹನ್ನಬರ ಮಾಡದಿದ್ದಡೆ ಭಕ್ತಿಗೆ ಭಂಗವಯ್ಯಾ ಕೂಡಲಚೆನ್ನಸಂಗಯ್ಯಾ.