Index   ವಚನ - 74    Search  
 
ಶಿವ ಸಾಧ್ಯವೆಂದು, ಶಿವ ವೇದ್ಯವೆಂದು, ಶಿವ ಸತ್ಯವೆಂದು, ಶಿವ ಸಹಜವೆಂದು, ಶಿವ ನಿರುತವೆಂದು, "ಯುದ್ದ್ಧಾವಃ ತದ್ಭವತಿ" ಎಂಬ ಭಾವಬಲಿದು, ಬಂದವರನೆ ಶಿವನೆಂದು ನಂಬುವುದು. "ರೂಪವಾನ್ ರೂಪಹೀನೋ ವಾ ಮಲಿನೋ ಮಲಿನಾಂಬರಃ| ಯೋಗೀಂದ್ರಸ್ಯ ತ್ವಸಂದೇಹಂ ದೇಹಾದೀನ್ನ ವಿಚಾರಯೇತ್|| ಅಭೋಗಿನಂ ಭೋಗಿನಂ ವಾ ಪೂಜಯೇಚ್ಛಿವಯೋಗಿನಮ್| ಪ್ರತ್ಯಹಮನ್ನ ಪಾನಾದ್ಯೈಃ ಶಯನೇನಾಸನೇನ ವಾ"|| ಎಂದುದಾಗಿ, ಇದು ಕಾರಣ ಕೂಡಲ ಚೆನ್ನಸಂಗಯ್ಯಾ ಲಿಂಗಾನುಭಾವಿಗಳ ಬರವಿಂಗೆ ಇಂಬುಗೊಡುವುದಲ್ಲದೆ "ಯತ್ರ [ಜೀವಃ] ತತ್ರ ಶಿವಃ"ಎಂದು ನುಡಿವರೆ ಭಕ್ತನಲ್ಲಯ್ಯಾ.