Index   ವಚನ - 73    Search  
 
ಜಂಗಮ ಬರಬೇಕೆಂದು ಲಿಂಗಾರ್ಚನೆಯ ಮಾಡುವುದು. ಆ ಜಂಗಮ ಬಂದರೆ ತನ್ನ ಲಿಂಗಾರ್ಚನೆಯ ಮಾಡು, ಜಂಗಮಾರ್ಚನೆಯ ಮಾಡಬೇಕು. ಲಿಂಗದಲೇನುಂಟು, ಜಂಗಮದಲೇನುಂಟೆಂದರೆ: ಲಿಂಗದಲ್ಲಿ ಫಲವುಂಟು ಪದವುಂಟು ಛಲವುಂಟು ಭವವುಂಟು. ಜಂಗಮದಲ್ಲಿ ಫಲವಿಲ್ಲ ಪದವಿಲ್ಲ ಕುಲವಿಲ್ಲ ಛಲವಿಲ್ಲ ಭವವಿಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ ಜಂಗಮವೇ ಲಿಂಗವೆಂದು ನಂಬಿದನಾಗಿ ಬಸವಣ್ಣ ಸ್ವಯಲಿಂಗವಾದ.