ಆಜ್ಯೆ ಪೂಜೆಯೆಂತಿದ್ದರೇನು,
ಮನದ ಓಜೆ ನೆಲೆಗೊಳ್ಳದನ್ನಕ್ಕ?
ಜಲ ಚಾಂಡಾಲವಾದರೆ ತಾವರೆ ನೆಲೆಗೊಂಬುದೇ?
ಮನ ಚಾಂಡಾಲವಾದರೆ ಲಿಂಗ ನೆಲೆಗೊಂಬುದೇ?
ಭಾವವಿಟ್ಟ ಕರುವಿನಂತೆ, ಅಲ್ಲಿಪ್ಪನೆ ಶಿವನು?
ಥಳಥಳಿಸದು, ಹೊಳೆಹೊಳೆಯದು, ಕೆರಕು ಕಲ್ಲಿನಂತೆ ಇಪ್ಪುದಯ್ಯಾ ಪರುಷವು.
ಆ ಪರುಷದಂತುವನಾರು ಬಲ್ಲರು?
ಹೆಮ್ಮೆಗೆರಗುವರಲ್ಲದೆ ಆ ಘನವನೆತ್ತಬಲ್ಲರು?
ಕೂಡಲಚೆನ್ನಸಂಗನ ಶರಣರ ಅಂತಕ ಬೊಂತಕರೆನಬೇಡ,
ಅವರಂತುವನಾ ಶಿವನೇ ಬಲ್ಲ.
Art
Manuscript
Music
Courtesy:
Transliteration
Ājye pūjeyentiddarēnu,
manada ōje nelegoḷḷadannakka?
Jala cāṇḍālavādare tāvare nelegombudē?
Mana cāṇḍālavādare liṅga nelegombudē?
Bhāvaviṭṭa karuvinante, allippane śivanu?
Thaḷathaḷisadu, hoḷehoḷeyadu, keraku kallinante ippudayyā paruṣavu.
Ā paruṣadantuvanāru ballaru?
Hem'megeraguvarallade ā ghanavanettaballaru?
Kūḍalacennasaṅgana śaraṇara antaka bontakarenabēḍa,
avarantuvanā śivanē balla.
ಸ್ಥಲ -
ಭಕ್ತನ ಮಾಹೇಶ್ವರಸ್ಥಲ