Index   ವಚನ - 80    Search  
 
ಸಿರಿವಂತ ಶಿಷ್ಯಂಗೆ ಗುರು ದರಿದ್ರನಾದರೆ ಅಭಿಮಾನದಿಂದ ಅವಿಶ್ವಾಸವ ಮಾಡುವ ನರಕಿಯನೆನ್ನತ್ತ ತೋರದಿರಯ್ಯಾ. ಜಂಗಮವೆ ಲಿಂಗ, ಲಿಂಗವೆ ಜಂಗಮವೆಂದ ಬಳಿಕ ಅಲ್ಲಿ ಸು[ಖಿ] ಸಾಮಾನ್ಯವೆಂಬ ಪಾಪಿಯ ಮುಖವನೆನ್ನತ್ತ ತೋರದಿರಯ್ಯಾ. "ರೂಪಾನ್ವಿತಂ ಕು[ವಿ]ರೂಪಂ ವಾ ಮಲಿನಂ ಮಲಿನಾಂಬರಂ| ಯೋಗೀಂದ್ರಶಂಕಯಾನಿತ್ಯಮತಿಥಿಂ ನ ವಿಚಾರಯೇತ್"|| ಎಂಬ ವಚನವ ನಂಬಿದೆನಯ್ಯಾ, ಕೂಡಲಚೆನ್ನಸಂಗಾ ನಿಮ್ಮಾಣೆ.