Index   ವಚನ - 81    Search  
 
ಗುರುವ ನರನೆಂದೆನಾದರೆ ಹಿಂದಣ ಭವಮಾಲೆ ಹಿಂಗದು. ಗುರುಶಬ್ದಕ್ಕೆ ರೋಷವ ಮಾಡಿದೆನಾದರೆ, ಶ್ವಾನನ ಬಳಗದಂತಪ್ಪೆನು. ಗುರೂಪದೇಶವ ಮೀರಿದೆನಾದರೆ ಎನಗೆ ಏಳೇಳು ಭವಕರ್ಮ ಹಿಂಗದು. ಇದು ಕಾರಣ ಶ್ರೀ ಗುರುಲಿಂಗವು ಪರಶಿವನೆಂಬೆನು. ಕೂಡಲಚೆನ್ನಸಂಗಯ್ಯಾ, ಇವ ನಂಬದಿದ್ದರೆ ಭವ ಹಿಂಗದು.