Index   ವಚನ - 87    Search  
 
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ, ಅದಾವಂಗೆ ಅಳವಡುವುದು? ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ, ಪ್ರಮಾದವಶ ಬಂದರೆ ಹುಸಿಯೆಂಬವರಿಲ್ಲ. ನಿರಾಶೆ, ನಿರ್ಭಯ ಕೂಡಲಚೆನ್ನಸಂಗಾ ನೀನೊಲಿದ ಶರಣಂಗಲ್ಲದಿಲ್ಲ.