Index   ವಚನ - 101    Search  
 
ಲಿಂಗಪ್ರಸಾದ ಭವಕ್ಕೆ ಬೀಜ, ಜಂಗಮಪ್ರಸಾದ ಭವಂ ನಾಸ್ತಿ. ವಾಸನೆಯೆ ಲಿಂಗಭಕ್ತಿ, ನಿರ್ವಾಸನೆಯೆ ಜಂಗಮಭಕ್ತಿ. ಇದು ಕಾರಣ ಜಂಗಮ ಪ್ರಸಾದವನಲ್ಲದೆ ಕೊಂಡೆನಾದಡೆ ಅಘೋರ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.