Index   ವಚನ - 102    Search  
 
ಜಂಗಮವಾರೋಗಿಸಿ ಮಿಕ್ಕುದು ಲಿಂಗಕ್ಕೋಗರ, ಲಿಂಗವಾರೋಗಿಸಿ ಮಿಕ್ಕುದು ಪ್ರಸಾದ, ನೀಡಬಹುದು. ಜಂಗಮಮುಖದಲ್ಲಿ ಅರ್ಪಿತವಾದುದು ಓಗರವಾಯಿತ್ತು. ಲಿಂಗಮುಖದಲ್ಲಿ ಪ್ರಸಾದವಾಯಿತ್ತು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿನಗೆಯೂ ಎನಗೆಯೂ ಜಂಗಮದ ಪ್ರಸಾದವೇ ಪ್ರಾಣವಯ್ಯಾ.