Index   ವಚನ - 105    Search  
 
ಕಂಗಳ ಮುಂದಣಿಂದ ಶ್ರೀಗುರು ಲಿಂಗ ಹಿಂಗಿದರೆ, ವ್ರತಕ್ಕೆ ಭಂಗವಾದಹುದೆಂದು ತಂದುಕೊಟ್ಟ ಶ್ರೀಗುರು ಕರಸ್ಥಲದಲ್ಲಿ ಪ್ರಾಣಲಿಂಗವ. ಆ ಲಿಂಗವ ಮುಟ್ಟಲೊಡನೆ ತನು ಪ್ರಸಾದವಾಯಿತ್ತು. ಇಂತು ಸರ್ವಾಂಗಪ್ರಸಾದವಾಯಿತ್ತು. ಕೂಡಲ ಚೆನ್ನಸಂಗಯ್ಯಾ.