Index   ವಚನ - 107    Search  
 
ಒಂದಾಗಿ ತೋರಿದರೆ ಮೂರಾಗಿ ವಿವರಿಸುವೆ: ಗುರುವೆಂಬೆ ಲಿಂಗವೆಂಬೆ ಜಂಗಮವೆಂಬೆ ನಿರಂತರ ಎನ್ನ ಮನೋಮೂರ್ತಿಯಾಗಿಪ್ಪ ಕಾರಣ ನಾನು ಮತ್ತೊಂದನರಿಯೆನಯ್ಯಾ, ಕೂಡಲಚೆನ್ನಸಂಗಮದೇವಾ.