Index   ವಚನ - 108    Search  
 
ಲಿಂಗ ಪ್ರಣಾಮವ ಮಾಡುವೆ, ಲಿಂಗಾಲೋಕನವ ಮಾಡುವೆ. ಜಂಗಮ ಪ್ರಣಾಮವ ಮಾಡುವೆ, ಜಂಗಮಸಂಭಾಷಣೆಯ ಮಾಡುವೆ, ಪ್ರಸಾದ ಪ್ರಣಾಮವ ಮಾಡುವೆ, ಪ್ರಸಾದಭೋಗವ ಮಾಡುವೆ. ಈ ತ್ರಿವಿಧಾವಲೋಕನವ ಮಾಡುವೆ, ಕೂಡಲಚೆನ್ನಸಂಗಾ ನೀ ಮಾಡಿಸಲು.