Index   ವಚನ - 110    Search  
 
ಲಿಂಗಕ್ಕೆಂದು ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬ ಕರ್ಮಿಯ ನೋಡಾ, "ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಮ್| ಲಿಂಗಜಂಗಮಯೋರ್ಮಧ್ಯೇ ಜಂಗಮಸ್ತು ವಿಶೇಷತಃ"|| ಇದು ಕಾರಣ, ಜಂಗಮವೇ ಲಿಂಗ ಕೂಡಲಚೆನ್ನಸಂಗಮದೇವಾ.