Index   ವಚನ - 117    Search  
 
ಅಂಗದಲ್ಲಿ ಲೀಯವಾದವರು ಅಂಗದ ನುಡಿಗಡಣವೆ ನೋಡಾ. ಲಿಂಗದಲ್ಲಿ ಲೀಯವಾದವರು ಲಿಂಗದ ನುಡಿಗಡಣವೆ ನೋಡಾ. ಆವ ಸ್ಥಳದಲ್ಲಿ ನಿಂದವರು ಆ ಸ್ಥಳವನೆ ನುಡಿವರು ನೋಡಾ. ನಮ್ಮ ಕೂಡಲಚೆನ್ನಸಂಗನ ಶರಣರು ಆ ಲಿಂಗದ ನಡೆ, ಆ ಲಿಂಗದ ನುಡಿಗಡಣವೆ ನೋಡಾ.