Index   ವಚನ - 127    Search  
 
ಮನ ವಚನ ಕಾಯದಲ್ಲಿ ಆಸೆಯಿಲ್ಲದ ಶರಣ, ಅರ್ಥ ಪ್ರಾಣ ಅಭಿಮಾನದಲ್ಲಿ ಲೋಭವಿಲ್ಲದ ಶರಣ, ವಾಕ್ಕು ಪಾಣಿ ಪಾಯು ಪಾದ ಗುಹ್ಯವೆಂಬ ಕರ್ಮೇಂದ್ರಿಯಂಗಳನು ಹೊದ್ದಲೀಯದ ಶರಣ, ಲಿಂಗಜಂಗಮದ ಪ್ರಸಾದಸಾರಾಯ ಶರಣ, ಕೂಡಲಚೆನ್ನಸಂಗ[ನ] ಅನುಭಾವಸಾರಾಯ ಶರಣ.