ಅನಲನೇ ಗುರುವೆಂದು ಇದಿರಾಸನವೇರಿ
ಭಾಷೆಗೆ ತಪ್ಪುವ ಪಾತಕರ ವಿಧಿಯೆಂತೊ?
"ವರ್ಣಾನಾಂ ಬ್ರಾಹ್ಮಣೋ ಗುರುಃ"
ಎಂದು ವರ್ಣವನರಸುವ ಕುನ್ನಿಗಳ ವಿಧಿಯೆಂತೊ?
'ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ
ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಃ"
ಎಂಬ [ಆದಿಯ] ಮರೆದವರ ಕೂಡಲಚೆನ್ನಸಂಗಯ್ಯನು
ಇರಿದಿರಿದು ಸುಟ್ಟು ಮರೆವನಲ್ಲದೆ ಮೆರೆವನೆ?