Index   ವಚನ - 149    Search  
 
ಬ್ರಹ್ಮನನಾರಾಧಿಸಿ ನಿರ್ಮೂಲವಾದರಯ್ಯ, ವಿಷ್ಣುವನಾರಾಧಿಸಿ ಭವಭವಕ್ಕೆ ಬಂದರಯ್ಯ, ಭೈರವನನಾರಾಧಿಸಿ ಬಾಹಿರವೋದರಯ್ಯಾ, ಮೈಲಾರನನಾರಾಧಿಸಿ ಕುರುಳು ಬೆರಳ ಕಡಿಸಿಕೊಂಡು ನಾಯಾಗಿ ಬಗಳುತಿಪ್ಪರು. ಜಿನನನಾರಾಧಿಸಿ ಲಜ್ಜೆನಾಚಿಕೆ ದೊರೆದರು ನೋಡಾ, ನಮ್ಮ ಕೂಡಲಚೆನ್ನಸಂಗಯ್ಯನನಾರಾಧಿಸಿ ದೇವಾ, ಭಕ್ತರೆಂದೆನಿಸಿಕೊಂಬರು ನೋಡಯ್ಯಾ.