Index   ವಚನ - 150    Search  
 
ಉಣ್ಣೆ ಕೆಚ್ಚಲ ಹತ್ತಿದ್ದರೇನು, ಕ್ಷೀರದ ರುಚಿಯಬಲ್ಲುದೆ? ತಗಣಿ ತನುವ ಹತ್ತಿದ್ದರೇನು, ಅಂಗನೆಯರ ಸುರತದ ಸುಖವ ಬಲ್ಲುದೆ? ಗಿಳಿ ಓದಿದರೇನು ಲಿಂಗವೇದಿಯಪ್ಪುದೆ? ವೇಸರ ಏಸು ದೊಡ್ಡದಾದರೇನು ತೇಜಿಯಾಗಬಲ್ಲುದೆ? ತತ್ತ್ವದ ಮಾತು ಅಂಗಸಂಗಿಗಳಿಗೇಕೆ? ಭರ್ಗನ ಸಂಗ ಭವಿಗೇಕೆ? ಪಚ್ಚೆಯ ಪವಳದ ಗುಡಿಗೂಡಾರವೇಕೆ ಗೂಗೆಗೆ? ಗವುಡರ ಮನೆಯ ತೊತ್ತಿಂಗೆ ಬಲ್ಲಹನಾಣೆಯೇಕೆ? ಕಿರುಕುಳ ದೈವಕ್ಕೆರಗಿ ನರಕಕ್ಕಿಳಿವ ದುರಾಚಾರಿಗಳಿಗೆ ಶಿವಾಚಾರವಳಡುವುದೆ, ಕೂಡಲಚೆನ್ನಸಂಗಮದೇವಾ?