Index   ವಚನ - 152    Search  
 
"ಬ್ರಹ್ಮಣಿ ಚರತಿ ಬ್ರಾಹ್ಮಣಃ" ಎಂದೆಂಬಲ್ಲಿ ಬ್ರಹ್ಮವೆಂದೆಂಬುದು ಎಮ್ಮ ಶಿವಲಿಂಗ ಕಾಣಿರೋ. "ಓಂ ತಸ್ಯ ತೃತೀಯಂ ಜನ್ಮೇತಿ" ಎಂಬುದಾಗಿ ವಿಪ್ರ ದ್ವಿಜನಲ್ಲ. "ದ್ವಿಜಸ್ತಸ್ಮೈ ಸಮರ್ಪ್ಯತೇ ಶೈವಮಂತ್ರಂ ಪ್ರಶಸ್ತಂ" ಎಂಬುದಾಗಿ ವಿಪ್ರ ದ್ವಿಜನಲ್ಲ. "ತತ್ಸರ್ವೇ ಯೇ ನಿಜಾಃ ಪ್ರಾಣಾಃ ಜಂತೂನಾಂ ಸಮಜಂತುಷು| ದ್ವಿತೀಯೇ ಮಂತ್ರತಾ ಶೈವೇsದ್ವಿತೀಯ ಇತ್ಯುಚ್ಯತೇ ಬುಧೈಃ"|| ಎಂಬುದಾಗಿ ವಿಪ್ರ ದ್ವಿಜನಲ್ಲ. ಇದು ಕಾರಣ ಕೂಡಲಚೆನ್ನಸಂಗನ ಶರಣರೇ ವಿಪ್ರೋತ್ತಮರು.