Index   ವಚನ - 163    Search  
 
ಓಲೆಯಕಾರ ಭಕ್ತನಾದರೆ ಮನದ ಕ್ರೋಧ ಬಿಡದು. ಒಕ್ಕಲಿಗ ಭಕ್ತನಾದರೆ ಅವನ ಪೂರ್ವಾಶ್ರಯ ಬಿಡದು. ಹಾರುವ ಭಕ್ತನಾದರೆ ಜಾತಿ ಸೂತಕ ಬಿಡದು. ಬೆವಹಾರಿಯ ಭಕ್ತಿಯೊಂದು ಶಬ್ದದಲ್ಲಿ ಹೋಯಿತ್ತು. ಅರಸಿನ ಭಕ್ತಿ ಅರಸಿ ನೋಡಲಿಲ್ಲ. ಸೂಳೆಯ ಭಕ್ತಿ ಹದಿನೆಂಟು ಜಾತಿಯ ಎಂಜಲ ತಿಂದಿತ್ತು. ಕೂಡಲಚೆನ್ನಸಂಗಯ್ಯಾ ಮಜ್ಜನಕ್ಕೆರೆವ ಭವಿಗಳನೇನೆಂಬೆ?