Index   ವಚನ - 162    Search  
 
ತದ್ದಿನವ ಮಾಡುವ ಕ್ರೂರಕರ್ಮಿಯ ಮನೆಯಲ್ಲಿ ಮದ್ಯ ಮಾಂಸವಲ್ಲದೆ ಲಿಂಗಕ್ಕೋಗರವಿಲ್ಲ. ಹರಸಿಕೊಂಡು ಮಾಡುವ ಭಕ್ತನ ಮನೆಯಲು ದಂಡಕ್ಕಿಕ್ಕುವುದಲ್ಲದೆ ಲಿಂಗಕ್ಕೋಗರವಿಲ್ಲ. ವರುಷಕ್ಕೊಂದು ತಿಥಿಯೆಂದು ಕೂಟಕ್ಕಿಕ್ಕಲು ಕೀರ್ತಿವಾರ್ತೆಗೆ ಸಲುವುದಲ್ಲದೆ ಲಿಂಗಕ್ಕೋಗರವಿಲ್ಲ. "ತದ್ದಿನಂ ದಿನದೋಷ: ಸ್ಯಾತ್ ರಕ್ತಮಾಂಸಸುರಾನ್ವಿತಮ್| ಸ ಸಂಕಲ್ಪಂ ವಿಕಲ್ಪಂ ಚ ನರಕೇ ಕಾಲಮಕ್ಷಯಂ"|| ಈ ತ್ರಿವಿಧವಿಡಿದು ಮಾಡುವಾತ ಭಕ್ತನಲ್ಲ, ಅಲ್ಲಿ ಹೊಕ್ಕು ಮಾಡಿಸಿಕೊಂಬವರು ಜಂಗಮವಲ್ಲ. ಕೂಡಲಚೆನ್ನಸಂಗಯ್ಯಾ ಈ ತ್ರಿವಿಧವು ನರಕಕ್ಕೆ ಭಾಜನ.