Index   ವಚನ - 167    Search  
 
ಶಿವಮಂತ್ರ ಸಂಸ್ಕಾರವಿಲ್ಲದ ತನುಭವಿಗಳು ತನ್ನಲಿಂಗಕ್ಕೆ ಮಾಡುವನ್ನಕ್ಕ ಭವಿಮಿಶ್ರವ ಕಳೆದೆವೆಂದೆಂತೆನಬಹುದು? ಶಿವಸಂಸ್ಕಾರವಾಗಿ ಜಾತಿಸೂತಕ [ಜನನಸೂತಕ] ಪ್ರೇತಸೂತಕ ರಜಸ್ಸೂತಕ ಎಂಜಲುಸೂತಕವೆಂಬ ಪಂಚಸೂತಕವುಳ್ಳ ಭವಿಗಳು ತನ್ನ ಲಿಂಗಕ್ಕೆ ಮಾಡುವನ್ನಕ್ಕ ಭವಿಮಿಶ್ರವ ಕಳೆದೆವೆಂದೆಂತೆನಬಹುದು? ತನುಭವಿಯ ಹಸ್ತವೆ ಪಂಚ ಮಹಾಪಾತಕ ಮನಭವಿಯ ಹಸ್ತವೆ ಅಘೋರನರಕ. 'ಭವಿನಾಂ ಪಾಪದೃಷ್ಟೀನಾಂ ನ ಕಿಂಚಿತ್ಪರಮಂ ಪದಮ್' ಎಂಬುದನರಿದು ಇಂತಪ್ಪ ಭವಿಗಳನೊಳಗಿಟ್ಟುಕೊಂಡು ಎನಗೆ ಭವಿಮಿಶ್ರವಿಲ್ಲೆಂಬ ಲಜ್ಜೆಗೆಟ್ಟ ದುರಾಚಾರಿಗಳ ಸಜ್ಜನಸದ್ಭಕ್ತರು ಮೆಚ್ಚರು ಕೂಡಲಚೆನ್ನಸಂಗಮದೇವಾ.