Index   ವಚನ - 168    Search  
 
ಸದ್ಭಕ್ತರ ಬಸುರಲ್ಲಿ ಹುಟ್ಟಿದ ಮಕ್ಕಳು ಭವಿಯನಾಚರಿಸಿದಡೆ ಪಂಚಮಹಾಪಾತಕವೆಂದುದು ವಚನ. "ತಿಲಷೋಡಶಭಾಗಂ ಚ ತೃಣಾಗ್ರಾಂಬುಕಣೋಪಮಂ| ಪಾದೋದಕಂ ಪ್ರಸಾದಪ್ರಾಶನಾನ್ನರಕಂ ವ್ರಜೇತ್"|| ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರಿಗೆ ಸಂತಾನವರೆಯಲಿ.