Index   ವಚನ - 178    Search  
 
ತಮ್ಮಾಚಾರಕ್ಕೆ ಅನ್ಯರಿಗೆ ಪ್ರಾಣಲಿಂಗಸಂಬಂಧವ ಮಾಡುವರಯ್ಯಾ. ಹೊದ್ದಿತ್ತಲ್ಲಾ ಗುರುವಚನಕ್ಕೆ ಭಂಗ, ಅದೇಕೆಂದರೆ: ಏಕಕಾಲ ಲಿಂಗಾರ್ಚನೆ ತಡೆದರೆ ರೌರವನರಕವೆಂದುದಾಗಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಉಪದೇಶವ ಮಾಡುವುದು ರೌರವನರಕ.