Index   ವಚನ - 192    Search  
 
ಹುಟ್ಟಿದ ಶಿಶು ಧರಣಿಯ ಮೇಲೆ ಬಿದ್ದಂತೆ ವಿಭೂತಿಯ ಪಟ್ಟವಂ ಕಟ್ಟಿ, ಲಿಂಗಸ್ವಾಯತವ ಮಾಡಿ ಪ್ರಸಾದದೆಣ್ಣೆ ಬೆಣ್ಣೆ ಹಾಲನೆರೆದು ಸಲಹೂದೆ ಅದು ಸದಾಚಾರ. ಆ ಮಗುವಿಂಗೆ ಈರಿಲು [ಗಾಳಿ]ಭೂತ ಸೋಂಕಿತ್ತೆಂದು ಮಾಡುವ ಭಕ್ತಂಗೆ ಗುರುವಿಲ್ಲ, ಲಿಂಗವಿಲ್ಲ, ಅವ ಪಂಚಮಹಾಪಾತಕ ನೋಡಾ. ಇದನರಿದಾತ ಎನ್ನ ಮಾತಾಪಿತನು. ನಿಮ್ಮ ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು ಕೂಡಲಚೆನ್ನಸಂಗಯ್ಯಾ.