Index   ವಚನ - 193    Search  
 
ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ, ಲಿಂಗವೆಂಬ ಗಂಡನ ತಂದು, ಮದುವೆಯ ಮಾಡಿದ ಬಳಿಕ ಇನ್ನಾರೊಡನೆ ಸರಸವನಾಡಲೇಕಯ್ಯಾ? ನಾಚಬೇಕು ಲಿಂಗದೆಡೆಯಲ್ಲಿ, ನಾಚಬೇಕು ಜಂಗಮದೆಡೆಯಲ್ಲಿ, ನಾಚಬೇಕು ಪ್ರಸಾದದೆಡೆಯಲ್ಲಿ, ನಾಚಿದಡೆ ಭಕ್ತನೆಂಬೆನು, ಯುಕ್ತನೆಂಬೆನು, ಶರಣನೆಂಬೆನು, ನಾಚದಿದ್ದರೆ ಮಿಟ್ಟೆಯ ಭಂಡರೆಂಬೆನು ಕೂಡಲಚೆನ್ನಸಂಗಮದೇವಾ.