Index   ವಚನ - 206    Search  
 
ಲಿಂಗವಲ್ಲದೆ ಎನ್ನ ಮನಕ್ಕೆ ಸಮನಿಸದು, ಸಮನಿಸದು. ಜಂಗಮವಲ್ಲದೆ ಎನ್ನ ಧನಕ್ಕೆ ಸಮನಿಸದು, ಸಮನಿಸದು. ಪ್ರಸಾದವಲ್ಲದೆ ಎನ್ನ ತನುವಿಗೆ ಸಮನಿಸದು, ಸಮನಿಸದು. ಕೂಡಲಚೆನ್ನಸಂಗಯ್ಯಾ, ಇದು ಸತ್ಯ ನೋಡಯ್ಯಾ, ಸಕಳೇಂದ್ರಿಯಂಗಳು ಅನ್ಯಸಂಗಕ್ಕೆ ಸಮನಿಸವು, ಸಮನಿಸವು.