Index   ವಚನ - 257    Search  
 
ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ, ನಿನ್ನನರಿಯದ ಮುಕ್ತಿಯೆ ನರಕ ಕಂಡಯ್ಯಾ. ನೀನೊಲ್ಲದ ಸುಖವೆ ದು:ಖ ಕಂಡಯ್ಯಾ, ನೀನೊಲಿದ ದುಃಖವೆ ಪರಮಸುಖ ಕಂಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು.