Index   ವಚನ - 236    Search  
 
ಹುಟ್ಟದ ಯೋನಿಯಿಲ್ಲ, ಮೆಟ್ಟದ ನೆಲನಿಲ್ಲ, ಉಣ್ಣದಾಹಾರವಿಲ್ಲ ಆವರ್ತನ, ಪರಿವರ್ತನ! ಕಾಲಚಕ್ರ ಕರ್ಮಚಕ್ರ ಬಿಂದುಚಕ್ರ ನಾದಚಕ್ರದ ದಾರಿಯಲ್ಲಿ ನುಗ್ಗು ನುಸಿಯಾದ ಜೀವಂಗಳು ಮುಟ್ಟಬಹುದೆ ಗುರುವ? ಅರ್ಚಿಸಬಹುದೆ ಲಿಂಗವ? ಕೊಳಬಹುದೆ ಪ್ರಸಾದವ? ಭವಂ ನಾಸ್ತಿಯಾದಂಗಲ್ಲದೆ. "ನಾನಾಯೋನಿಸಹಸ್ರಾಣಿ ಕೃತ್ವಾ ಚೈವಂತು ಮಾಯಯಾ| ಆಹಾರಂ ವಿವಿಧಾಕಾರಂ ಪೀತಾಸ್ತು ವಿವಿಧಾಃ ಸ್ತನಾಃ"|| ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ತ್ರಿಸ್ಥಾನ ಶುದ್ಧವಾದಂಗಲ್ಲದೆ ನಾನಾ ಆಹಾರ ಕೊಟ್ಟು ಪ್ರಸಾದಿಯಾಗ.