Index   ವಚನ - 237    Search  
 
ಅಂಗದ ಮೇಲೆ ಲಿಂಗವಿಲ್ಲದವರು ಲಿಂಗಕ್ಕೆ ಬೋನವ ಮಾಡಲಾಗದು. ಮಾಡಿದರೆ [ಮಾಡಲಿ], ಅವರು ಮಾಡಿದ ಬೋನವ ಲಿಂಗಕ್ಕೆ ಕೊಟ್ಟು ಪ್ರಸಾದವೆಂದು ಕೊಂಡರೆ, ಕುಂಭೀಪಾಕ ನಾಯಕನರಕ ಕೂಡಲಚೆನ್ನಸಂಗಮದೇವಾ.