Index   ವಚನ - 259    Search  
 
ಪಾದೋದಕ ಪ್ರಸಾದ ನಿರ್ಣಯ ಅನುಭವಿಗಲ್ಲದೆ ಕಾಣಬಾರದು. ಏಕೋಲಿಂಗ ಪ್ರತಿಗ್ರಾಹಕನಾಗಿ ಅನ್ಯಲಿಂಗವ ಮುಟ್ಟಲಾಗದು. ಪ್ರಾಣಲಿಂಗಪ್ರಸಾದವಲ್ಲದೆ ಬಹುಲಿಂಗಪ್ರಸಾದ ಕಿಲ್ಬಿಷವೆಂದುದು ಗುರುವಚನ. ಆನರ್ಪಿತವ ಮುಟ್ಟಲಾಗದಿದೆಂತೋ ಶರಣ ಸಜ್ಜನಿಕನೆ ಬಲ್ಲನು. ಕೂಡಲ ಚೆನ್ನಸಂಗಯ್ಯಾ, ನಿಮ್ಮ ಶರಣ ಸಂಬಂಧವಪೂರ್ವ.