Index   ವಚನ - 260    Search  
 
ಶ್ರೋತ್ರೋತ್ಪಾತವ ಕಾಯಬೇಕು ಶರಣಂಗೆ, ನೇತ್ರೋತ್ಪಾತವ ಕಾಯಬೇಕು ಶರಣಂಗೆ, ಘ್ರಾಣೋತ್ಪಾತವ ಕಾಯಬೇಕು ಶರಣಂಗೆ, ಜಿಹ್ವ್ಯೋತ್ಪಾತವ ಕಾಯಬೇಕು ಶರಣಂಗೆ, ಸ್ಪರ್ಶೋತ್ಪಾತವ ಕಾಯಬೇಕು ಶರಣಂಗೆ. ಎಲ್ಲ ಉತ್ಪಾತವ ಕಾದಲ್ಲದೆ ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದ ನಿಷ್ಠೆ ಸೂರೆಯೆ?