Index   ವಚನ - 263    Search  
 
ಅರಸು ಮನೆಯೊಳಗಿದ್ದಲ್ಲಿ ಬಾಗಿಲಿಗೆ ಪದಾರ್ಥವ ತಂದು ಅರ್ಪಿತವೆಂದರೆ ಅರ್ಪಿತವಹುದೆ? ಅವಸರಕ್ಕೆ ಬಂದ ಪದಾರ್ಥವ ಅರ್ಪಿತವ ಮಾಡಿ, ಅನವಸರಕ್ಕೆ ಬಂದ ಪದಾರ್ಥವನೋಸರಿಸಿದರೆ ಆತ ಲಿಂಗಪ್ರಸಾದಿಯಲ್ಲ. ತನ್ನ ಲಿಂಗಕ್ಕೆ ಬಾರದ ರುಚಿ ಕೃತಕಿಲ್ಬಿಷವೆಂದುದು ಕೂಡಲಚೆನ್ನಸಂಗನ ವಚನ.