Index   ವಚನ - 262    Search  
 
ಕಂಗಳ ನೋಟ ಲಿಂಗಕ್ಕೆ [ಪೂಜೆ], ಮನಮುಟ್ಟಿದಾರೋಗಣೆಯೆಂಬುದೇನೊ? ಸಂಕಲ್ಪ ವಿಕಲ್ಪವಿರಹಿತ ನಿಮ್ಮ ಶರಣಂಗೆ ಸೀಮೆಯೆಂಬುದೇನೊ? ಕಾಯದ ಕೈಯಲು ಲಿಂಗಾರ್ಪಿತವದು ಕಿಲ್ಬಿಷ ಕೂಡಲಚೆನ್ನಸಂಗಮದೇವಾ.