ಸತ್ಯವಿಲ್ಲದ ಭಕ್ತಿಯ ಸಾವಿರ
ವರುಷ ಮಾಡಿದರೇನು?
ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು?
ಭಾವ ನೆಲೆಗೊಳ್ಳದ ಪ್ರಸಾದವನೇಸುಕಾಲ
ಕೊಂಡಲ್ಲಿ ಫಲವೇನು?
ಅಭ್ಯಾಸವಾಯಿತ್ತಲ್ಲದೆ, ಒಬ್ಬರೊಬ್ಬರ
ಕಂಡು ಮಾಡುವರಲ್ಲದೆ,
ಸಹಜವಿಲ್ಲ, ಸಮ್ಯಕ್ಕಿಲ್ಲ, ನಿಜವಿಲ್ಲ.
ಇದು ಕಾರಣ, ಇಂತಪ್ಪವರ ಭಕ್ತರೆಂದೆನಲಾಗದು,
ಕೂಡಲಚೆನ್ನಸಂಗಯ್ಯಾ ನೀ ಸಾಕ್ಷಿಯಾಗಿ
ಛೀಯೆಂಬೆನು.
Art
Manuscript
Music
Courtesy:
Transliteration
Satyavillada bhaktiya sāvira
varuṣa māḍidarēnu?
Niṣṭheyillada pūjeyanēsukāla māḍidarēnu?
Bhāva nelegoḷḷada prasādavanēsukāla
koṇḍalli phalavēnu?
Abhyāsavāyittallade, obbarobbara
kaṇḍu māḍuvarallade,
sahajavilla, samyakkilla, nijavilla.
Idu kāraṇa, intappavara bhaktarendenalāgadu,
kūḍalacennasaṅgayyā nī sākṣiyāgi
chīyembenu.
ಸ್ಥಲ -
ಪ್ರಸಾದಿಯ ಮಾಹೇಶ್ವರಸ್ಥಲ