Index   ವಚನ - 292    Search  
 
ಸಂಕರ ಸಂಕರವೆಂದು ಸಹಜವರಿಯದೆ ನುಡಿವ ಶ್ವಾನನ ಮಾತ ಕೇಳಲಾಗದು, ಸಂಕರವಾವುದೆಂದರಿಯರಾಗಿ. ಲಿಂಗ ಸಂಕರವೊ? ಜಂಗಮ ಸಂಕರವೊ? ಪ್ರಸಾದ ಸಂಕರವೊ? ತ್ರಿವಿಧದಲ್ಲಿ ಹೊರಗಿಲ್ಲ. ಆವ ಸಂಕರದಲ್ಲಿ ಆವುದಿಚ್ಛೆ? ಬಲ್ಲರೆ ನೀವು ಹೇಳಿರೇ. ಬರುಮಾತಿನ ಬಳಕೆಯ ಬಳಸಿ ಹಿರಿಯರಾದೆವೆಂಬ ಮೂಕೊರೆಯರನೇನೆಂಬೆ, ಕೂಡಲಚೆನ್ನಸಂಗಮದೇವಾ.