Index   ವಚನ - 293    Search  
 
ಲೋಕದೊಳಗಿಪ್ಪವರು, ಲೋಕದೊಳು ಸುಳಿವವರು, ಲೋಕದ ಹಂಗಿಗರು, ಲಿಂಗದ ಶುದ್ಧಿಯ ತಾವೆತ್ತ ಬಲ್ಲರು? ಬರಿದೆ ಹೋರುವ ಭ್ರಮಿತರು. ಇವರು, ತ್ರಿವಿಧಕ್ಕೆ ವಿರಹಿತರೆಂಬೆ ಕೂಡಲಚೆನ್ನಸಂಗಮದೇವಾ.