Index   ವಚನ - 302    Search  
 
ನಿಮ್ಮಲ್ಲಿ ಸನ್ನಹಿತವಲ್ಲದ ತನುವಿನ ಭಿನ್ನ ಭಾವವನೇನ ಹೇಳುವೆನಯ್ಯಾ? ಲಿಂಗ ಭಿನ್ನಭಾವದ ಮನಸಿನ, ಲಿಂಗ ಭಿನ್ನಭಾವದ ತನುವಿನ ಅಪ್ಯಾಯನ ಅನರ್ಪಿತವಾಯಿತ್ತು. ಎನ್ನಲ್ಲಿ ಅನುದಿನ ಅಗಲದಿಪ್ಪ ಕೂಡಲಚೆನ್ನಸಂಗಯ್ಯನೆನ್ನ ಪ್ರಾಣನಾಥನಾಗಿ.