Index   ವಚನ - 309    Search  
 
ಸರ್ವಾರ್ಪಿತವ ಮಾಡಬೇಕೆಂಬರು, ಸರ್ವೇಂದ್ರಿಯಸನುಮತವಾದುದನರಿಯರು. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ [ತ್ವಕ್ಕು] ಸಹಿತ ಅರ್ಪಿತವ ಮಾಡಬೇಕು. "ಪ್ರಾಣಪ್ರಯಾಣಕಾಲೇsಪಿ ಸರ್ವಭೋಗೇಷು ಯಸ್ಸದಾ ಅರ್ಪಣೇ ಚಾವಧಾನೀ ಚ ಸ ಲಿಂಗೀ ಪ್ರಾಣನಾಯಕಃ" ಎಂದುದಾಗಿ ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ.