Index   ವಚನ - 339    Search  
 
ಕಾಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋ[ಗ]ದು. ಇಂದ್ರಿಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋಗದು. ತನ್ನಿಂದಲೇ [ಅಹುದು], ತನ್ನಿಂದಲೇ ಹೋಹುದು. ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರವುಳ್ಳನ್ನಕ್ಕರ, ಕೂಡಲಚೆನ್ನಸಂಗನಲ್ಲಿ ಶರಣನೆನಿಸಲು ಬಾರದು.