Index   ವಚನ - 393    Search  
 
ಎನ್ನ ತನುವೆ ಅಗ್ಘವಣಿಯ ಬಿಂದಿಗೆ, ಮನವು ಸಿಂಹಾಸನ, ಹೃದಯಕಮಲ ಪುಷ್ಪ, ಎನ್ನ ಕಿವಿಗಳು ಕೀರ್ತಿಮುಖ, ನೆನೆವ ನಾಲಗೆ ಘಂಟೆ, ಶಿರವೆ ಸುವರ್ಣದ ಕಳಸ, ಎನ್ನ ನಯನ ಸ್ವಯಂಜ್ಯೋತಿ ಆರತಿಯನೆತ್ತುವೆ. ಎನ್ನ ಚಂದ್ರಶೇಖರಲಿಂಗಕ್ಕೆ ಮಾಡಿದೆನೆನ್ನ ಪ್ರಾಣಪೂಜೆಯ. ಎನ್ನ ಕಾಯಭಾಜನವನೀಪರಿಯ ಮಾಡಿದೆನಾಗಿ ಕೂಡಲಚೆನ್ನಸಂಗನ ಪೂಜಿಸಿದಲ್ಲದೆ ನಿಲಲಾರೆ