Index   ವಚನ - 394    Search  
 
ನೂರನಾಲ್ವತ್ತೆಂಟು ದೇಹ ವಿಕಾರಕ್ಕೆ ಮನವೆ ತೇಜಿ, ಕರಣಂಗಳೇಳು ಮಾನಿಸ ಸೇನಬೋವರು, ಅಷ್ಟಮದವೆಂಟಾನೆ, ಮೊದ[ಲ] ನಾಯಕರಿಪ್ಪತ್ತೈವರು. ಕಾಯಪುರವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಹೆಸರಿನ ಲಿಂಗವ ಪೂಜಿಸುವಾತ ಅಜಾತನೆಂಬ ಶರಣ. ಆ ಶರಣನ ಮರ್ತ್ಯನೆಂದರೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.