Index   ವಚನ - 395    Search  
 
ಗುರುದ್ರವ್ಯವ ಗುರುವಿಂಗೊಪ್ಪಿಸಿಹೆವೆಂಬರು. ಗುರುದ್ರವ್ಯವಾವುದೆಂದರಿಯರು. ದೇಹಿಕದ್ರವ್ಯ, ಮನದ್ರವ್ಯ, ಭೌತಿಕ ದ್ರವ್ಯ, ಆತ್ಮದ್ರವ್ಯ, ಜ್ಞಾನದ್ರವ್ಯವೆಂಬ ಪಂಚದ್ರವ್ಯವನು ಉಭಯವಳಿದು ಷೋಡಶೋಪಚರ್ಯದಲ್ಲಿ ಉಪಚರಿಸಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಪೂಜಕನಾದ.