Index   ವಚನ - 401    Search  
 
ಸ್ಥಾವರ ಜಂಗಮ ಒಂದೆಂಬರು ನೀವು ಕೇಳಿರೆ: ಸ್ಥಾವರವೆ ಲಿಂಗ, ಜಂಗಮವೆ ಭಕ್ತ. ಪೂಜಿಸುವುದು ಲಿಂಗ, ಪೂಜೆಗೊಂ[ಬುದು] ಜಂಗಮ. ಸ್ಥಾವರ-ಜಂಗಮ ಒಂದಾದ ಕಾರಣ ಜಂಗಮವೆನಿಸಿತ್ತು. ದೇವ-ಭಕ್ತನೊಂದಾದ ಕಾರಣ ಸ್ಥಾವರವೆನಿಸಿತ್ತು. ಸ್ಥಾವರವೇ ಘಟವು, ಜಂಗಮವೆ ಪ್ರಾಣವು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣ ಸ್ವತಂತ್ರ.