Index   ವಚನ - 402    Search  
 
ನೇಮವೆಂದೇನು? ನಿತ್ಯವೆಂದೇನು? ಆಗಮವೆಂದೇನು? ಆಚಾರವೆಂದೇನು? ಲಿಂಗಜಂಗಮದ ಕುಳವೊಂದೇ ಎಂದು ಸಂಪಾದಿಸಲ[ರಿಯ]ದೆ ನಾಲ್ಕು ಯುಗಂಗಳು ಇಂತೆ ಹೋದವು. ಕಂಡು ಹೇಳರು, ತಂದು ತೋರರು, ಅವರು ಮಹಂತರೇ? ಕೂಡಲಚೆನ್ನಸಂಗಮದೇವ ಸುಲಭವಾಗಿ ಶರಣಸನ್ನಿಹಿತ ಲಿಂಗವು.