Index   ವಚನ - 410    Search  
 
ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ ಅವರನೇನೆಂಬೆನಯ್ಯಾ? ಆವ ಭಾವದಲ್ಲಿ ಆವ ಮುಖದಲ್ಲಿ ಆವ ಜ್ಞಾನದಲ್ಲಿ ಆವರನಯ್ಯಯೆಂಬೆನು? ನಿಮ್ಮಲ್ಲಿ ಸಮ್ಯಕ್ಕಾದ ಸತ್ಯಶರಣರ ಅವರನಯ್ಯಯೆಂಬೆನು ಕೂಡಲಚೆನ್ನಸಂಗಮದೇವಾ.